Tuesday, March 3, 2009

ಕೊನೆಗೂ ಕಳೆದುಹೊಯ್ತು ಮನಸು

ಅಪ್ಪ ಅಮ್ಮ ತೊರಿಸಿದ ಹುಡುಗಿಯನ್ನೇ ಪ್ರೀತಿಸುವುದಾಗಿ ತೀರ್ಮಾನಿಸಿ ತು೦ಬಾ ವರ್ಷ ಕಳೆದುಹೋಗಿತ್ತು. ಕಾಲೇಜು ಸ್ನೇಹಿತರ ಯಾವ ಮಾತು ಕೇಳದೇ ಇಲ್ಲಿಯವರೆಗೆ ಈ ಮನಸು ಹಿಡಿದಿಟ್ಟುಕೊ೦ಡಿದ್ದೆ.
ಯಾವ ಕ್ಷಣ ನಿನ್ನ ನೊಡಿ ಮಾತಾಡಿದೆನೊ, ಓ ಗೆಳತಿ ಕ್ಷಣಾರ್ದದಲ್ಲಿ ಹಾಳಾಗಿತ್ತು ಇಸ್ಟು ವರ್ಶಗಳ ಪರಿಶ್ರಮ.
"ತು೦ಬಾ ದಣಿದಿರುವ೦ತೆ ಕಾಣಿಸ್ತೀಯಾ ೨೦ ಗ೦ಟೆಯ ಪೂರ್ತಿ journey ನಿದ್ದೆ ಮಾಡಿಲ್ಲವೇ?" ಎ೦ದು ಕೇಳುವ ಸ್ನೇಹಿತರಿಗೆ ಏನೆ೦ದು ಉತ್ತರಿಸಲಿ!!! ನಿನಾಡಿದ ಪ್ರತೀ ಮಾತು ಪ್ರತಿಧ್ವನಿಸುತ್ತಿತ್ತು ಎನ್ನಲೇ? ಕಣ್ಮುಚ್ಚಿದರು ನಿನ್ನ ಮುಖವೇ ಕ೦ಡು ನಿದ್ರಾಭ೦ಗವಾಯಿತೆನ್ನಲೇ?
ನಿನಗೇನೋ ನಾನರಿಯೆ... ನಿನ್ನೊ೦ದಿಗೆ ಕಳೆದ ಆ ಕೆಲವು ಗ೦ಟೆಗಳನ್ನು ನಾನ೦ತು ಮರೆಯಲಾರೆ. Orkut ನಿ೦ದ ಪ್ರಾರ೦ಭವಾದ ಈ ಸ್ನೇಹ ಹೀಗೊಮ್ಮೆ ನನ್ನ ಮನಸು ಕಳೆದುಕೊಳ್ಳುವೆನೆ೦ದು ಯೋಚಿಸಿರಲಿಲ್ಲ!!!

ಅಪ್ಪ ತೋರಿಸಿದ ಹುಡುಗಿ ನೋಡಿಲ್ಲವೆ೦ದು ಹೇಳಲಾರೆ, ಒಪ್ಪಿಗೆ ಆಗಿಲ್ಲ ಅಸ್ಟೆ. ಅವ ಬರೆದಿಗಿದ್ರೆ ಅಪ್ಸರೆಯ೦ತ ಕೂಸ ತೋರಿಸಿದ್ರು ಒಬ್ರಿಗೊಬ್ರು ಒಪ್ಪಿಗೆ ಆಗ್ತಿಲ್ಲೆ ಹೇಳಿದ ಅಜ್ಜನ ನೆನಪಾಗ್ತಿದ್ದು.

ಓ ದೇವರೆ, ಅಸ್ಟು ಸಮಯ ಮಾತನಾಡಿದ್ರು ಪ್ರೀತಿ ಹೇಳಿಕೊಳ್ಳುವ ಧೈರ್ಯ ಏಕೆ ಕಿತ್ತುಕೊ೦ಡೆ? ನನಗೆ ಅನಿಸಿದ೦ತೆ ಅವಳಿಗೂ ಅನಿಸಿದೆಯೇ?

ನಿನ್ನ ಆ ಒ೦ದು ಸುಳಿವಿಗಾಗಿ ಹಾತೊರೆಯುತ್ತಿರುವ,
ಪರಮ್.

No comments:

Post a Comment