ಮನಸೊಂದು
ಮರ್ಕಟ, ಅದನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಅವಶ್ಯ ಎ೦ದು ತಾತ ಹೇಳುತ್ತಿದ್ದುದು
ನಿಜವೇ ಇರಬಹುದು. ಆದರೆ ಆಗಾಗ ತನ್ನಷ್ಟಕ್ಕೆ
ಬಿಡುವುದೂ ಅತ್ಯವಶ್ಯ ಎ೦ಬುದು ನನ್ನ ಅಭಿಪ್ರಾಯ.
ಈವತ್ತೇ ನೋಡಿ, ನಿನ್ನೆ ಮಲಗುವಾಗ ಯೋಚಿಸಿದ೦ತೆ 8ರ Alarmಗೆ ಕಾಯದೆ, ಬೇಗನೆ ಎದ್ದು ಮುಂಜಾನೆಯ ಕೈ೦ಕರ್ಯ ಮುಗಿಸಿ ಬಾಲ್ಕನಿಯಲ್ಲಿ ಕುರ್ಚಿ ಎಳೆದು ಕುಳಿತು ಕಂಡ ಬಣ್ಣದ ಆಕಾಶ ಬಾಲ್ಯವನ್ನು ನೆನಪಿಸಿತ್ತು. ಅಲ್ಲೇ ಸಿಗುವ ಬಣ್ಣದ ಕಲ್ಲುಗಳನ್ನು ತಳೆದು ತೊರೆಯಲ್ಲಿ ತೊಳೆದುಬಿಟ್ಟಾಗಿನ ಬಣ್ಣವೇ ಮೋಜು. ಅಲ್ಲಿ ಮೂಡುವ ವಿಚಿತ್ರ ಆಕೃತಿಗಳಿಗೆ ಕೊಟ್ಟ ಹೆಸರು ಆಹಾ ಈಗಲೂ ಮುಗುಳ್ನಗು ಕಾಣಿಸಿಕೊಳ್ಳುವದು!
ಕೊರೋನಾದ೦ತ ಭೀಕರ ಸಮಸ್ಯೆಯನ್ನು ಎದುರಿಸುವ ಸಾಮೂಹಿಕ ಜವಾಬ್ಧಾರಿಯಿ೦ದ ಮನೆಯಲ್ಲೇ ಕುಳಿತು, ಮಾಹಿತಿಕಾರಿ ಹಾಗು ಸಲಹಾತ್ಮಕ ವೀಡಿಯೊ ಮತ್ತು ಸ೦ದೇಶಗಳನ್ನು ಸಾಮಾಜಿಕ ತಾಣಗಲ್ಲಿ ಮರುವಿಸ್ತರಿಸಿ, ಕೆಲವು ಆತ್ಮೀಯ ಜೀವಗಳೊಂದಿಗೆ ಸಾ೦ಭಾಷಣೆ ನಡೆಸಿ ಯೊಗಕ್ಷೇಮ ವಿಚಾರಿಸಿ ಒಂದೆರಡು ಬಿಟ್ಟಿ ಸಲಹೆಗಳನ್ನೂ ಕೊಟ್ಟು ಜವಾಬ್ಧಾರಿ ನಿರ್ವಹಿಸಿ ಆಯಿತಲ್ಲ!
ಇನ್ನುಳಿದ
ಇ೦ದಿನ ಸಮಯ ಕೂಡ, ಆ
ಬೆಳಗಿನ ಕ್ಷಣಗಳಂತೆ ನನ್ನ ಮರ್ಕಟ ಮನಸ್ಸಿಗೆಂದು
ಬಾಲ್ಕನಿಯಲ್ಲೇ ತೀರ್ಮಾನವಾಗಿತ್ತು. ಇಷ್ಟದ ತಿಂಡಿ, ಒಂದಿಷ್ಟು ಮೆಲೋಡಿ ಹಾಡುಗಳು, ಹಿಂದೆಂದೋ
ಸವೆಸಿದ ಕ್ಯಾಮೆರಾ ರೋಲುಗಳ ಚಮತ್ಕಾರ, ಜೊತೆಗೊಂದು ಬಿಸಿಬಿಸಿ Coffee. ಆಗಲೇ ಕೈಗೆ ಬಂದಿದ್ದು
ಈ ಪೆನ್ನು ಪೇಪರ್!
ಇದಂತೂ
ನನ್ನಪಾಲಿಗೆ ಮರ್ಕಟ ಮನಸಿನ ಪರಮಾವಧಿ! ನೆನಪುಗಳ
ಮಹಾಪೂರದಲ್ಲಿ ಕೊಚ್ಚಿಹೋಗುವ ಮನಸು, ಬಯಸದೆ
ಬಂದುಹೋಗುವ ಭಾವೋದ್ವೇಗ, ಬಯಸಿಯೂ ಬರೆಯಲಾಗದ ಹಲವಾರು ವಿಚಾರಗಳು, ನನ್ನೊಳಗಿನ ಶಬ್ಧಕೋಷ ಸಾಲದೆನಿಸಿಬುಡುತ್ತದೆ!
ಈಗ ಸಾಕು! ಹೀಗೆ ಬರೆಯುತ್ತ ಕುಳಿತರೆ, ಹೊಟ್ಟೆಯಲ್ಲಿನ ಹುಳುಗಳನ್ನು ಕೊಂದ ಪಾಪ ತಟ್ಟುತ್ತದೆ!
No comments:
Post a Comment