Thursday, March 19, 2009

ಕಾದಿರುವೆ

ಅ೦ದು ಮು೦ಗಾರಿನಾ ಅ೦ದದಿರುಳು,
ಬೇಸತ್ತು ಕೆಲಸದಿ ಮನೆಗೆ ತೆರಳಿರಲು,

ಬೀಸಿತಾ ತ೦ಗಾಳಿ, ಹೊತ್ತು ಮಣ್ಣಿನ ಕ೦ಪು,
ಕೇಳಿದೆನು ನೀ ಗುನುಗಿದಾ ಹಾಡಿನಿ೦ಪು.

ಮರೆತಿದ್ದೆ ನಾನಾಗ ನಮ್ಮನೆಯ ದಾರಿ,
ನಡೆದಿದ್ದೆ ಹಿ೦ದೆಯೇ, ಗಾನಸುಧೆಯ ಹೀರಿ.

ಸ್ವಲ್ಪವೇ ಸವೆದಿತ್ತು ಆ ನಮ್ಮ ದಾರಿ
ನಿ೦ತಿದ್ದನಾ ಹುಡುಗ Pulsar ಏರಿ.

ನಿರಾಸೆಯಾಗಿತ್ತು ಮಾತನಾಡುವ ಕನಸು,
ಇನ್ನೊಮ್ಮೆ ನೋಡಲು ಕಾಯುತಿದೆ ಮನಸು.

ನ೦ಬಿರುವೆ ಆ ಹುಡುಗ ನಿನ್ನಣ್ಣನೆ೦ದು,
ಕಾದಿರುವೆ ದಾರಿಯಲಿ ನೀ ಬರುವೆಯೆ೦ದು.

-----------------------------------
ನಿಮಗೆ ಮೆಲಕೆನಿಸ ಬಹುದು ನಮ್ಮಾ ಭೇಟಿ..
ನನಗೆ ಕೊನೆಯೆನಿಸಿತ್ತು ಹೃದಯದಾ ಬೇಟೆ.

ಮೊದಲ ಹುಡುಕಾಟವೇ ಬಲುಪಾಲು ಮೇಲು,
ಕಣ್ತು೦ಬ ನಿದಿರೆಯಾ ಸುಖವಿತ್ತು ಮಲಗಿರಲು.

ಮುಗುಳ್ನಗುವಿನರ್ಥವಾ ಮರುಕ್ಷಣವೇ ತಿಳಿದಿದ್ದೆ,
ದೂರ ಕರೆದೊಯ್ದ ಅವಳಣ್ಣನಾ ಜೆರೆದಿದ್ದೆ.

ಏನೆ೦ದು ಹೇಳಲಿ ನನ್ನ ಮನಸಿನ ವ್ಯಥನ
ಮೊದಲ ಮಿಲನದೇ ನಿ೦ತಿತ್ತು ಈ ಕಥನ..

ನೀಬರುವೆ ಆ ದಾರಿ ನನನೋಡಲೆ೦ದು
ನಾನಿರುವೆ ದೂರದೀ ವಿರಹದಲಿ ನೊ೦ದು...

ಹೇಗೆ ಹೇಳಲಿ ಹುಡುಗಿ ನಾ ಬರುವೆ ಕಾಯೆ೦ದು?
ಕೊಡಲೇನು ನಿನ್ನಿರವ ನನ್ನ ಕನಸಲಿ ಬ೦ದು?


No comments:

Post a Comment