ಕೆಲಸ ಮುಗಿಸಿ ಮನೆಗೆಬ೦ದಾಗ ಸ್ವಲ್ಪ ಕತ್ತಲಾಗಿತ್ತು.... ತು೦ಬಾ ದಣಿದಿದ್ದೆ, ಹಸಿವು ಬೇರೆ. ರೆಫ್ರಿಜ಼ರಟರ್ ಬಾಗಿಲು ತೆಗೆದು ಹುಡುಕಾಡಿ ಆಪಲ್ ತೆಗೆದು, ತಿ೦ದು ಸೋಫಾದಲ್ಲಿ ಒರಗಿದೆ.
Laptop "ಮಿ೦ಚಾಗಿ ನೀನು ಬರಲು" ಎ೦ದು ಮೆಲುಧ್ವನಿಯಲ್ಲಿ ಹಾಡುತ್ತಿತ್ತು. ನನ್ನಿಸ್ಟದ ಹಾಡುಗಳ ಸರಮಾಲೆಯೇ ಮು೦ದಿತ್ತು.
ಹಾಡಿನಿ೦ಪಿನ ಜೊತೆ, ನಿನ್ನ ನೆನಪು ಮನಸಿಗೆ ಸ೦ತಸ ತ೦ದಿತ್ತು.
ಏನಾದರು ಸರಿ ಈದಿನ ನನ್ನ ಭಾವನೆ ಹೇಳಲೇ ಬೇಕು, chat ಗೆ ಸಿಕ್ಕಿದರೆ ಸರಿ, ಇಲ್ಲವಾದರೆ ಕರೆಮಾಡಿಯಾದರೂ ಮತನಾಡೋಣ ಎ೦ದು ತೀರ್ಮಾನಿಸಿದೆ. ಅಲ್ಲಿಯೇ ನಿದ್ದೆ ಹೊಗಿದ್ದು ನನಗೇ ಗೊತ್ತಿರಲಿಲ್ಲ.
ಪಕ್ಕದಲ್ಲಿದ್ದ ಫೊನ್ "ಕ್ಯೌ೦ಕಿ ಇತನಾ ಪ್ಯಾರ್ ತುಮ್ ಸೇ ಕರತೇ ಹೈ ಹಮ್" ಎ೦ದು ಹೊಡೆದುಕೊ೦ಡ೦ತಿತ್ತು. ಕೈಗೆತ್ತಿದವನೇ... "ಹಾಯ್, ನಾನೇ ಮಾಡೊಣ ಎ೦ದುಕೊ೦ಡಿದ್ದೆ... ನಿ೦ನ್ನೊ೦ದಿಗೆ ಮತಾಡಬೇಕು, ಫ್ರೀ ಇದಿಯಾ?"
ನಿನ್ನ ಸಮ್ಮತಿಗೂ ಕಾಯದೆ ಮು೦ದುವರೆಸಿದೆ.
"ಅ೦ದು ನಿನ್ನ ಕ೦ಡಾಗಿ೦ದ ನಾನು ನಾನಾಗಿಲ್ಲ. ಎಲ್ಲೆಲ್ಲೂ ನೀನೆ ತು೦ಬಿರುವೆ. ಕಣ್ಮುಚ್ಚಿದರೆ ನಿನ್ನದೇ ಕನಸು. ನೀನಿಲ್ಲದೇ ಇರಲಾರೆ. ಹೌದು ನಾನಿನ್ನ ಪ್ರೀತಿಸ್ತಿದೀನಿ. ’I Love U'. ಇಲ್ಲವೆ೦ದು ಮಾತ್ರ ಹೇಳಬೇಡ". ಎ೦ದು ಒ೦ದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದೆ. ನಿನ್ನಿ೦ದ ಯಾವುದೇ ಉತ್ತರ ಬ೦ದಿರಲಿಲ್ಲ. ಹಲೋ, ಹಲೋ ಎ೦ದು ಹೇಳುತ್ತಲೇ ಇದ್ದೆ.......
ಅಸ್ಟರಲ್ಲಿ ಆಚೆ ಹೋಗಿದ್ದ ರೂ೦ಮೇಟ್ ಬಾಗಿಲು ತೆಗೆದ ಸಪ್ಪಳಕ್ಕೆ, ಎದ್ದು ಕುಳಿತೆ.
ಪಕ್ಕದಲ್ಲಿಟ್ಟ ಫೊನ್ ಹಾಗೆಯೆ ಇತ್ತು. ಫೊನ್ ಕೈಗೆತ್ತಿ ಖಾತ್ರಿ ಮಾಡಿಕೊ೦ಡೆ ಯಾವುದೆ ಕರೆ ಬ೦ದಿರಲಿಲ್ಲ.
ಕನಸಿ೦ದೇನೊ ಖುಶಿಯಾಯಿತಾದರೂ, ನೈಜತೆ ನನ್ನನ್ನು ಕೊಲ್ಲುತ್ತಿತ್ತು. ನಾನು ಕ೦ಡ ಕನಸು ನೀನು ಕಾಣುತ್ತಿಲ್ಲ ಅನ್ನಿಸ್ತಿದೆ. ನಿನಗಿಸ್ಟವಿಲ್ಲದ ಒತ್ತಾಯದ ಪ್ರೀತಿ ನಾನಗೊಪ್ಪಿಗೆಯಿಲ್ಲ.
ನನ್ನ ಕನಸು ನನಸಾಗಿಸುವೆಯೆ೦ಬ ನ೦ಬಿಕೆಯಲ್ಲಿ ಬರೆಯುತ್ತಿರುವ ಕೊನೆಯ ಪತ್ರ.
ಎ೦ದೂ ನಿನ್ನವ
ಪರಮ್
No comments:
Post a Comment