ನೂಕುನುಗ್ಗಲ ಜನದಟ್ಟಣೆಯ ಗೌಜು ಗದ್ದಲಕೆ
ಬಲಿಯಾದ ಗುಬ್ಬಚ್ಚಿ ಸ್ವಚ್ಛಂದ ಆಗಸ ಹುಡುಕಿ
ಹಾಯಾಗಿ ವಿಹರಿಸಲು ಹುರುಪಲ್ಲಿ ಕರೆಯುತಿದೆ!
ಹಸಿರು ಕೆಂಪುಗಳ ಕಣ್ಣಾಮುಚ್ಚಾಲೆಗೆ
ಬೇಸತ್ತ ವಾಹನ ಖಾಲಿ ರಸ್ತೆಯ ಹುಡುಕಿ
ಮಿಂಚಿನೋಟಕೆ ಕಾತರದಿ ಕರೆಯುತಿದೆ!
ಮೂಲೆಯೊಂದರ ಧೂಳುಂಡು
ಹಳೆತು ಮಸಕಲಾದ ಪ್ರವಾಸಿ ಸರಕುಗಳು
ಧೂಳ್ಕೊಡವಿ ಹೊಸದಾಗಿ ಕೈಸೆಳೆದು ಕರೆಯುತಿವೆ!
ಚಳಿಗಾಲದ ಕಳ್ಳ ಮಳೆಮೋಡಕೆ
ಮಸುಕಾದ ಮನ ಅವಿತ ಚಂದ್ರಮನ ಹುಡುಕಿ
ಮುಗಿಲೆತ್ತರದಿ ಗುಡಾರ ಹೂಡಿ ನಿದ್ರೆಗೆಳೆಯುತಿದೆ!
ಹೋಗಿಬರಲೇ!?

No comments:
Post a Comment