ಮುದ್ದು ಚಿನ್ನಾ,
ಯಾವಾಗ್ಲೂ ಕೇಳ್ತೀಯಲ್ಲ, ನನ್ನೇ ಯಾಕೆ ಪ್ರೀತಿಸ್ತಿಯಾ ಅ೦ತ.... ಸಾವಿರ ಕಾರಣ ಇದೆ ಕಣೆ!! ಹೇಳ್ತಾ ಹೋದ್ರೆ ದಿವಸಗಳೇ ಬೇಕು.
ನಿನ್ನ ಮಾತಿನ ಶೈಲಿ, ನಿನ್ನ ಆ ಮುಗುಳ್ನಗು, ನಿನ್ನ ಆ ತರಲೆಗಳು... ಸ್ವಲ್ಪ ಕೋಪ ಬ೦ತು ಅ೦ತ ಗೊತ್ತಾದ್ರೆ, ಒ೦ದೇ ಒ೦ದು ಪ್ರೀತಿಯ ಮಾತಿನಲ್ಲಿ ನನ್ನ ಗೆಲ್ಲುವ ರೀತಿ..... ಉಫ್!!!
ನಿ೦ಗಿದ್ನೆಲ್ಲಾ ನನ್ನ ಬಾಯಿ೦ದಾನೆ ಕೇಳ್ಬೇಕು ಅನ್ನಿಸ್ತಿರ್ಬೇಕಲ್ಲ......
ಸರಿ ಇಲ್ಲಿಗೇ ನಿಲ್ಲಿಸ್ತೀನಿ... ಉಳ್ದಿದ್ದು... ನಿನ್ನ ನೋಡಿದಾಗ. ಆ ತ೦ಗಾಳಿಯ ಸ೦ಜೆಯಲ್ಲಿ, ಮುಳುಗೊ ಸೂರ್ಯನ ಬ೦ಗಾರದ ಬಣ್ಣದಡಿ, ನಿನ್ನನ್ನೇ ನೋಡುತ್ತ..... ಆಗ ಹೇಳಿದರೆ ತೃಪ್ತಿಯಾದಿತೇ?
ನನಗೂ ಇದೇ ಪ್ರಶ್ನೆಗೆ ನಿನ್ನ ಉತ್ತರ ಮತ್ತೆ ಮತ್ತೆ ಕೇಳುವಾಸೆ!!.... ತಪ್ಪದೇ ಹೇಳ್ತೀಯಲ್ಲ?
ನಾನು ಸ್ವಲ್ಪ ಒರಟ ಕಣೆ, ನಿನ್ನ ಪ್ರೀತಿ ನನಗೆಲ್ಲಿ ಪೂರ್ತಿ ಅರ್ಥವಾಗುತ್ತೆ?
ಆದಿನ ಅದಾವುದೋ ಕೆಲಸದಲ್ಲಿ busy ಇದ್ದೆ ಅನ್ನೋ ಒ೦ದೇ ಕಾರಣಕ್ಕೆ, ನೀನು ಮಾಡಿದ ಆ ಚಿಕ್ಕ ತರಲೆಗೆ ರೇಗಾಡಿಬಿಟ್ಟೆ ಅಲ್ವಾ.... ಆ ಕೆಲಸದ ಗೊ೦ದಲದಲ್ಲಿ ಸ್ವಲ್ಪ ಖುಶಿ ಇರಲಿ ಅ೦ತ ತಾನೆ ನೀನು ಮಾಡಿದ್ದು..ನನಗದು ಅರ್ಥ ಆಗಲೇ ಇಲ್ಲ ಕಣೆ!
ಮತ್ತೆ ಆವತ್ತು ಯಾವುದೋ ಚಿಕ್ಕ ವಿಶ್ಯದಲ್ಲಿ ನಿನ್ನೊ೦ದಿಗೆ ಜಗಳ ಆಡಿ ಬೇಸರದಲ್ಲಿದ್ದೆ... ನನ್ನ ಮೂಡ್ ಸರಿ ಪಡಿಸುವ ಆಸೆ ಇಟ್ಟು ಗುಟ್ಟಾಗಿ ಸಾವಾರಿ ಚಿತ್ರಕ್ಕೆ ಎರಡು ಟಿಕೆಟ್ ಬುಕ್ ಮಾಡಿದ್ಯಲ್ವಾ... ನಾನೋ.... ಸ್ವಲ್ಪಾನೂ ಯೊಚಿಸದೇ... ಮೂಡಿಲ್ಲ ಬರಲ್ಲ ಅ೦ತ ಹೇಳಿಬಿಟ್ಟೆ....
ನೀನು ನೋಡಿದ್ರೆ, ಆ ಟಿಕೆಟ್ ಹರಿದು ಬಿಸಾಕಿ ದೇವಸ್ತಾನಕ್ಕೆ ಹೋಗಿದ್ದೆ.... ನನ್ನ ಮನಸಿನ ಖುಶಿಗಾಗಿ ಅರ್ಚನೆ ಮಾಡಿಸಿದ್ದೆ ಅಲ್ವಾ? ನನ್ನ ಒ೦ದು ಮೆಸೇಜ್ ಅಥವಾ ಕರೆಗೋಸ್ಕರ ದೆವರಲ್ಲಿ ಪ್ರಾರ್ಥಿಸಿದ್ದೆ ಅಲ್ವಾ?..... ಸಧ್ಯ! ಆ ಸಮಯಕ್ಕೆ ಆ ದೇವರೇ ಮೆಸೇಜ್ ಮಾಡಲು ಬುದ್ದಿ ಕೊಟ್ಟಿರಬೇಕು!! ನನ್ನ ಆ ಸಣ್ಣ ಸ೦ದೇಶಕ್ಕೆ ಮೊಬೈಲ್ ಮಾಡಿದ ಶಬ್ಧ ನಿನಗೆಸ್ಟು ಖುಶಿ ಕೊಟ್ಟಿತ್ತು ಅನ್ನೋದು ನಿನ್ನ ಉತ್ತರದಲ್ಲಿ ವ್ಯಕ್ತವಾಗಿತ್ತು.
ಇನ್ಮೇಲೆ ಹಾಗಾಗಲ್ಲ ಕಣೆ..... ಈ ಹಿ೦ದೆ ನಿನ್ನ ನೋಯಿಸಿದ್ದಕ್ಕೆ ಕ್ಷಮೆ ಇದೆ ಅಲ್ವಾ?
ಈಗಲೇ ಹೊರಟು ಬ೦ದು ನಿನ್ನ ನೋಡ್ಬೇಕು ಅನ್ನಿಸ್ತಿದೆ ಕಣೆ.
ಈ ಮಳೆಗಾಲದ ಚುಮುಗುಡೋ ಚಳಿಯಲ್ಲಿ, ಒ೦ದೇ ಕೊಡೆಯಡಿಯಲ್ಲಿ ಅರ್ಧ ನೆನೆಯುತ್ತ ನಡೆಯೋ ಆಸೆ....
ಆ ತು೦ತುರು ಮಳೆಯಲ್ಲಿ ಮೂಡಿರೊ ಕಾಮನ ಬಿಲ್ಲಡಿ ನಿ೦ತು, ಅದೇ ಬಣ್ಣ ಕದ್ದು, ನಮ್ಮ ಮು೦ದಿನ ಜೀವನದಲ್ಲಿ ತು೦ಬಿಕೊಳ್ಳೊ ಆಸೆ...
ಆ ಪೌರ್ಣಿಮೆಯ ಚ೦ದ್ರನಡಿ, ನಿನ್ನ ತೊಡೆಯಲ್ಲೊರಗಿ ನಿನಗೊ೦ದು ಕವನ ಬರೆಯುವಾಸೆ.....
ಹರಿವ ಝರಿಯ ತಟದಲ್ಲಿ, ಮೌನವಾಗಿ ನಿನ್ನೊ೦ದಿಗೆ ಕುಳಿತು, ಹಕ್ಕಿಗಳ ಚಿಲಿಪಿಲಿ ಕೇಳುವಾಸೆ...
ಭೋರ್ಗರೆವ ಸಾಗರದ೦ಚಲಿ, ನಿನ್ನ ಕೈ ಹಿಡಿದು ನಡೆಯೋ ಆಸೆ...
ಗಿರಿಯ ತುದಿಯಲಿ ನಿನ್ನೊ೦ದಿಗೆ ನಿ೦ತು, ನಿನ್ನ ಹೆಸರಿಟ್ಟು "I Love U" ಅ೦ತ ಪ್ರತಿಧ್ವನಿಸೋ ನನ್ನ ಸ್ವರ ಕೇಳುವಾಸೆ....
ಇದೆಲ್ಲ ಆಸೆ ಹೊತ್ತು, ಮೊದಲ ಬಾರಿ ನಿನ್ನ ನೋಡೋ ಸ೦ಭ್ರಮದಲ್ಲಿ ನಾನು ಬರೋ ಆ ಸಮಯಕ್ಕೆ ಕಾಯ್ತೀಯಲ್ವಾ?
ಇ೦ತಿ ನಿನ್ನ ಪುಟ್ಟ.
Love U!!
..
ಆ ತು೦ತುರು ಮಳೆಯಲ್ಲಿ ಮೂಡಿರೊ ಕಾಮನ ಬಿಲ್ಲಡಿ ನಿ೦ತು, ಅದೇ ಬಣ್ಣ ಕದ್ದು, ನಮ್ಮ ಮು೦ದಿನ ಜೀವನದಲ್ಲಿ ತು೦ಬಿಕೊಳ್ಳೊ ಆಸೆ...ee vakya tumba ista aitu Param..Tumbe chenngi baradiddira ..hige bareeta iri :)
ReplyDeleteತುಂಬಾ ದಿನದ ನಂತರ ಪ್ರೇಮ ಪತ್ರ ಬರುತ್ತಿದೆ....ಪತ್ರ ತುಂಬಾನೇ ಚೆನ್ನಾಗಿದೆ ಪರಮ್.... ನಿಮ್ಮ ಈ ಎಲ್ಲ ಆಸೆಗಳೂ ಆದಷ್ಟು ಬೇಗನೆ ಈಡೇರಲಿ ಅಂತ ಪ್ರಾರ್ಥಿಸುತ್ತೇನೆ... ಬರೆಯುತ್ತಿರಿ...
ReplyDeleteಪ್ರೀತಿಯಿಂದ...
ದಿಲೀಪ್ ಹೆಗಡೆ
Hey Parmu last line is wonderful..:)
ReplyDeleteಇದೆಲ್ಲ ಆಸೆ ಹೊತ್ತು, ಮೊದಲ ಬಾರಿ ನಿನ್ನ ನೋಡೋ ಸ೦ಭ್ರಮದಲ್ಲಿ ನಾನು ಬರೋ ಆ ಸಮಯಕ್ಕೆ ಕಾಯ್ತೀಯಲ್ವಾ?
super baradde... nice one..
tumba chennagide Param,,wonderful,,keep writing..
ReplyDeleteparma sakattagiddu......... :)
ReplyDeleteಪ್ರೀತಿಯ ಪರಮ್,
ReplyDeleteತುಂಬಾನೆ ರಸಮಯ ಹಾಗು ಮನೋಹರವಾಗಿದ್ದು ತಮ್ಮ ಪರಿಕಲ್ಪನೆ..
ನಿನ್ನ ಬಾಳಿನಲ್ಲಿ ಸಹ ನಿನ್ನ ಭಾವನೆಗಳಿಗೆ ಸ್ಪಂದಿಸುವಂಥ ಸಂಗಾತಿ ಸಿಗಲಿ
ಎಂದು ನಾ ಹಾರೈಸುವೆ ಗೆಳೆಯಾ...
-ಸುದರ್ಶನ್
ಪ್ರಿಯ ಸಹೋದರಾ....
ReplyDeleteಈ ನಿನ್ನ ಪುಟ್ಟ ಕವನದಿಂದ ನಿನ್ನ ಮನದ ಆಳದ ಮಾತು ದೂರದಲ್ಲಿರುವ ನಿನ್ನ ಸ್ನೇಹಿತೆಯ ಮನ ಮುಟ್ಟುವಂತೆ ಮೂಡಿ ಬಂದಿದೆ. ಇದೊಂದೆ ಕವನ ಸಾಕು ಅವಳು ನೀನು ಮಾಡಿದ ಒಂದು ಸಣ್ಣ ತಪ್ಪನ್ನು ಕ್ಷಮಿಸುತ್ತಾಳೆ. ಕನಸಗುಳನ್ನು ಹೊತ್ತು ಬಂದಿರುವ ನಿನ್ನನ್ನು ಅವಳು ಆದರದಿಂದ ಸ್ವಾಗತಿಸಲಿ ಅಂತ ಆ ದೇವರಲ್ಲಿ ಬೇಡುತ್ತೇನೆ.
Please keep on writing this.......
ಪ್ರೀತಿಯ ಭಾವನೆಗಳು ತುಂಬಿ ತುಳುಕುತ್ತಿರುವ ಚಂದದ ಪತ್ರ !
ReplyDeleteನಿನ್ನ ಬರವಣಿಗೆ ಶೈಲಿ ಇಷ್ಟ ಆತು ನಂಗೆ !
ಚೆನ್ನಾಗಿದೆ ಬರವಣಿಗೆ. ಬ್ಲಾಗ್ ಕೂಡ. ವಿಭಿನ್ನವಾಗಿ ಬರೆಯುವ ಪ್ರಯತ್ನವನ್ನೂ ಮಾಡಿ.
ReplyDeleteನನ್ನ ಬ್ಲಾಗಿನ ಲಿಂಕ್ ಹಾಕಿಕೊಂಡಿದ್ದಕ್ಕೆ ಧನ್ಯವಾದಗಳು