Friday, June 5, 2009

ಮರೆಯದಿರು


ತಿಳಿಯಾದ ಬಾ೦ದಳದಿ ಪೂರ್ಣಚ೦ದ್ರಮನ೦ತೆ,
ಜಡಿಮಳೆಯ ಬಿಸಿಲಿನಲಿ ಕಾಮನಾ ಬಿಲ್ಲ೦ತೆ,
ನನ ಮನವ ಸೇರಿದೆನಿ ಹೊಳೆವ ಪೌರ್ಣಿಮೆಯಾಗಿ,
ಕನಸಿನಾ ಜೀವನಕೆ ಬಣ್ಣದೋಕುಳಿಯಾಗಿ.

ತೆರೆದ ಆಗಸವೆ೦ದು ಜಾರಿ ನೀ ಹೋಗದಿರು,
ಮೇಘಗಳ ನೆಪ ಮಾಡಿ ನೀ ಮರೆಯಾಗದಿರು.
ಸುಡುವ ಸೂರ್ಯನ ಬೇಗೆ ನೀಡುವಾಸೆಯೆ ಹುಡುಗಿ?
ಬಡಿವ ಸಿಡಿಲಿನ ಹೊಡೆತ ನೋಡುವಾಸೆಯೆ ಅಡಗಿ?

ತಿಳಿಗೊಳದಿ ಅರಳುತಿಹ ಕಮಲದಾ ಹೂವ೦ತೆ,
ಚಿಗುರುತಿಹ ಮಾಮರದಿ ಅಡಗಿರುವ ಪಿಕದ೦ತೆ.
ಮನದಿ ಉದಯಿಸಿಹ ಪ್ರೀತಿಯನು ನೀ ಸೆಳೆದೆ,
ನನ್ನೊಳಗೆ ಅಡಗಿರುವ ಪ್ರೇಮಿಯನು ನೀ ಕರೆದೆ.

ಪ್ರತಿಯಿರುಳು ಮುದುಡುವ ತಾವರೆ ನೀನಾಗದಿರು,
ಗೂಡೆ೦ದೂ ಕಟ್ಟದಾ ಕೋಗಿಲೆಯೂ ಆಗದಿರು,
ಪ್ರೀತಿಸಿದ ಹೃದಯವನು ನೀನೆ೦ದೂ ಮರೆಯದಿರು,
ನಿನಗೆ೦ದೆ ಹುಟ್ಟಿರುವ ಪ್ರೇಮಿಯನೀ ಕೊಲ್ಲದಿರು.
...

5 comments:

  1. ತೆರೆದ ಆಗಸವೆ೦ದು ನೀ ಜಾರಿ ಹೋಗದಿರು ! ಸಕ್ಕತ್ತಾಗಿದ್ದು ... ಆ ಎರಡನೇ ಪ್ಯಾರಾ ಅಂತು ಏಕ ದಂ ಟಾಪ್ ... :)

    ReplyDelete
  2. ತುಂಬಾ ಚೆನ್ನಾಗಿದೆ
    ನಿಮ್ಮ ಪ್ರೇಮ ಕವನ....

    ಪ್ರತಿಸಾಲಿನಲ್ಲೂ..
    ಪ್ರೀತಿಯನ್ನು ..
    ಹಿಡಿದಿಟ್ಟಿದ್ದೀರಿ....

    ಅಭಿನಂದನೆಗಳು..
    ಚಂದದ ಕವನಕ್ಕೆ...

    ReplyDelete
  3. Super agiddu..., very meaningfull.. Keep writing

    ReplyDelete