
ನೋಡು ಬಾ ಮುಗಿಲೆ,
ಕಟ್ಟಿದೀ ಕಾರ್ಮೋಡವ.
ಬಿರುಗಾಳಿಗೂ ಕರಗದೀ,
ದಟ್ಟ ಕಾರ್ಮೋಡವ.
ನೋಡು ಕಾಮನಬಿಲ್ಲೆ,
ಚೆಲ್ಲಿದೀ ಬಣ್ಣವ.
ತೊಳೆದರೂ ಅಳಿಸದೀ,
ಹೊಳೆವ ರ೦ಗೋಲಿಯ.
ಸೈರಿಸು ಬಿರುಗಾಳಿಯೆ,
ತ೦ಗಾಳಿ ನೀನಾಗು.
ಕಾರ್ಮೋಡ ಕರಗಲಿ,
ತುಸು ಪ್ರೀತಿ ಸೋಕಿಗೆ.
ಹೊರಗೆ ಬಾ ಚ೦ದ್ರಮ,
ಇಣುಕಿ ನೋಡೊಮ್ಮೆ.
ತಿಳಿಮಳೆಯ ಮಿ೦ದು,
ನಾಟ್ಯವಾಡುವ ನವಿಲ.
ನೋಡು ಮೋಡದ ಬಣ್ಣ,
ಮನವೇ ನೀ ಹಗುರಾಗು.
ಸುರಿವ ಮಳೆಯಲಿ ನೆನೆದು,
ಮರಳಿ ನೀ ಮೃದುವಾಗು.
ಹುಣ್ಣಿಮೆಯ ಇರುಳಲಿ,
ಮತ್ತೆ ನೀ ನಗುವಾಗು :)
ನಗುವಾಗು.
ReplyDeleteಕತ್ತಲಮನಕೆ ಬೆಳಕಾಗು.
_ನನ್ನ ಬ್ಲಾಗಿಗೂ ಬನ್ನಿ.
ಚೆಂದವಿದೆ..
ReplyDeleteSundara Kavana..Dhanyavadagalu..
ReplyDeleteಚೊಲೋ ಇದ್ದೋ ಪರಮ...
ReplyDelete