Friday, December 18, 2009

ಬ೦ದುಬಿಡು

ದಟ್ಟಡವಿಯಲಿ ಕ೦ಗೆಟ್ಟು,
ತಾಯಿಯಾಸರೆಯನರಸುವ,
ಹಸುಗರುವು ಈ ಮನ,
ಬ೦ದುಬಿಡು ನೀನಾಸರೆಯಾಗಿ.

ಚಳಿಮಳೆಯಲಿ ನೆನೆದು,
ಮೈಮರಗಟ್ಟಿ ಮನೆಸೇರಿ,
ನಡುಗುತಿಹುದೀ ಮನ,
ಬ೦ದುಬಿಡು ಬಿಸಿನೀರ ಸ್ನಾನವಾಗಿ.

ಹಾಡುವಾ ತವಕದಲಿ
ಮಾಮರದಿ ಚಿಗುರ ಕಾದಿಹ,
ಕೋಗಿಲೆಯೇ ಈ ಮನ
ಬ೦ದುಬಿಡು ನೀ ನವವಸ೦ತವಾಗಿ.

ಕಾವ್ಯ ಬರೆವಾಸೆಯಲಿ,
ಹೊಳೆವ ಚ೦ದ್ರಮನ ಕಾದ,
ಕವಿಯು ಈ ಮನ,
ಬ೦ದುಬಿಡು ನೀ ಪೌರ್ಣಿಮೆಯಾಗಿ.

ಮನವ ಸೇರಿದ ನಿನ್ನ,
ಮನದಾಳದಲಿ ಬಚ್ಚಿಟ್ಟು,
ಪೂಜಿಸುವುದೀ ಮನ,
ಬ೦ದುಬಿಡು ನೀ ಪ್ರೇಮದೇವತೆಯಾಗಿ.

26 comments:

  1. ಕವನದಲಿ ಚಿಮ್ಮಿದ ಭಾವನೆಗಳಿಗೆ ಪ್ರೇಮದೇವತೆಯೇ ಪ್ರತ್ಯಕ್ಷವಾಗುವಂತಿದೆ.

    ReplyDelete
  2. wow, nice iddu parmu.. :)
    thank u so much 4 nice kavana :)

    ReplyDelete
  3. ಖಂಡಿತ ಬರುತ್ತಾಳೆ ನಿಮ್ಮ ಪ್ರೇಮದೇವತೆ ನೀವು ಬಯಸಿದ ಎಲ್ಲವೂ ಆಗಿ....
    ಕವನ ತುಂಬಾ ಚೆನ್ನಾಗಿದೆ...ಜೀವಂತಿಕೆ ತುಂಬಿದೆ ಪದಗಳಲ್ಲಿ...

    ReplyDelete
  4. ಪರಮ್
    ತುಂಬಾ ಚಂದದ ಕವನ
    ಸಾಲುಗಳೂ ಹಾಡುವಂತಿವೆ

    ReplyDelete
  5. Simply superb. awsome.. wonderful.. fantastic.. mind blowing.. beautiful.. sorry.. m going out of words. :) great Param..

    ReplyDelete
  6. ಪರಮ್,

    ನಿಜಕ್ಕೂ ಒಳ್ಳೆಯ ಕವನ.

    ReplyDelete
  7. tumbaa chennagide..ninna manadaase pooraisali..:)

    ReplyDelete
  8. ಧನ್ಯವಾದಗಳು ನಾರಾಯಣ್ ಭಟ್ರೆ :).

    ReplyDelete
  9. ಶ್ರೀ... ಪ್ರೊತ್ಸಾಹಕ್ಕೆ ಧನ್ಯವಾದಗಳು

    ReplyDelete
  10. ಜ್ಯೋತಿ. ಹಾರೈಕೆಯೊ೦ದಿಗಿನ ಮೆಚ್ಚುಗೆಗೆ ಧನ್ಯವಾದಗಳು.

    ReplyDelete
  11. ಗುರು. ಧನ್ಯವಾದಗಳು, ಹಾಡಲು ರಾಗ ಸ೦ಯೋಜಿಸಿ ಕೊಟ್ರೆ ಚೆನ್ನಾಗಿರ್ತು!!

    ReplyDelete
  12. ಧನ್ಯವಾದಗಳು ರ೦ಜಿತಾ.

    ReplyDelete
  13. ಧನ್ಯವಾದಗಳು ಶಿವು.

    ReplyDelete
  14. Thank you very much ಶಿವಪ್ರಕಾಶ್.

    ReplyDelete
  15. ಧನ್ಯವಾದಗಳು ಆಕಾಶಬುಟ್ಟಿ. :)

    ReplyDelete
  16. ತುಂಬಾ ಸುಂದರವಾಗಿದೆ ಕವನ. ಸರಳ ಹಾಗೂ ಹೃದ್ಯವಾಗಿದೆ.

    ReplyDelete
  17. ಧನ್ಯವಾದಗಳು ತೇಜಸ್ವಿನಿ.

    ReplyDelete
  18. ಧನ್ಯವಾದಗಳು ಗೌತಮ್.

    ReplyDelete
  19. ಪರಮ್....

    ತುಂಬಾ ಭಾವ ಪೂರ್ಣವಾಗೆ
    ಶಬ್ಧಗಳ ಅರ್ಥ, ಪ್ರಾಸ ಎಲ್ಲವೂ ಸೊಗಸಾಗಿದೆ..

    ಅಭಿನಂದನೆಗಳು ಚಂದದ ಕವನಕ್ಕೆ..

    ಸ್ಪೂರ್ತಿಯಾರೆಂದು ಗೊತ್ತಾಗಲಿಲ್ಲ...

    ReplyDelete
  20. ಧನ್ಯವಾದಗಳು ಪ್ರಕಾಶಣ್ಣ. ಎಲ್ಲಾ ಬ್ಲಾಗ್ ಗೂ ಸ್ಪೂರ್ಥಿನೇ ಬೇಕಾ?

    ReplyDelete