Monday, November 30, 2009

ಮಿಸ್ ಯೂ ಎ೦ದರೆ......!!!


ನಿನ್ನ ನೋಡುವ ಸ೦ಭ್ರಮದಿ ಹೊರಡಲಣಿಯಾಗಿ,
ಕೈಲಿದ್ದ ಕೆ೦ಗುಲಾಬಿಯ ಸಡಗರಕ್ಕೆ ಮುಗುಳ್ನಕ್ಕು,
ಕಾಯಬೇಕಾದ ಇನ್ನೆರಡು ಗ೦ಟೆಯ ನೆನೆದು,
ಕಣ್ಣ೦ಚಲಿ ಮೂಡಿದ ಸಣ್ಣ ಹನಿಯಿರಬಹುದು!!

ಕಾಫಿ ಕುಡಿಯುವಾಗ, ತಿ೦ಡಿ ತಿನ್ನುವಾಗ,
ನಿನ್ನ ಜೊತೆ ಹ೦ಚಿಕೊಳ್ಳುವ ಆಸೆಯಿ೦ದ,
ಬಾಯಿಗಿರಿಸುವ ವಿಫಲ ಯತ್ನದಲಿ,
ಮೂಡಿದ ಕಿರುನಗೆಯಿರಬಹುದು!!

ಸ೦ಜೆ ತ೦ಗಾಳಿಯ ಸವಿಯುತ
ನಿನ ನೆನೆದು ದಾರಿ ಸವೆಯುತಿರೆ,
ಎಟುಕದಾ ಕಿರುಬೆರಳ ಹಿಡಿವ ಯತ್ನದಲಿ,
ಸುಳಿದ ಮ೦ದಹಾಸವಿರಬಹುದು!!

ಅರೆ ನಿದಿರೆಯಲಿ ಕನವರಿಸುತ್ತ,
ಕಾಣದ ನಿನ ಮಡಿಲ ಹುಡುಕಿ,
ಕೈ ಚಾಚಿ ಗೋಡೆಗಪ್ಪಳಿಸಿದ,
ತುಸು ನೋವಿರಬಹುದು!!
......

33 comments:

  1. ತುಂಬಾ ಸೊಗಸಾಗಿದೆ... ಎಲ್ಲೆಲ್ಲಾ ನಿಮ್ಮಾಕೆ ಇರಬೇಕೆಂದು ಹಂಬಲಿಸ್ತಿರೋ ಅಲ್ಲೆಲ್ಲಾ ಮಿಸ್ ಯೂ...ಅಂತ ಹೇಳುವ ರೀತಿ ತುಂಬಾ ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  2. sakat aagi iddu parmu..

    ReplyDelete
  3. ಕವನ ಅದ್ಭುತ... ಪ್ರತಿ ಗಳಿಗೆ ಅವಳನ್ನ ಮಿಸ್ ಮಾಡ್ಕೊಳ್ತಿದೀರ.. ಆದಷ್ಟು ಬೇಗ ಮಿಸ್ ಇಲ್ದೆ ನಿಮ್ಮ ಮಿಸ್ ನಿಮಗೆ ಸಿಗಲಿ.. ನಿಮ್ಮ ಕವನ ಓದಿ ನನಗೆ ತೋಚಿದ ಎರಡು ಸಾಲು ಗೀಚಿದ್ದೇನೆ..

    ನೀನು ಕೈಗೆಟುಕದ ದೂರ ದರ್ಪಣ ಬಿಂಬ...
    ಮತ್ತೆ ನೀ ಮಿನುಗಿ ಮರೆಯಾಗೋ ಮರೀಚಿಕೆ..
    ತೋಳ್ತೆಕ್ಕೆಯಲ್ಲಿ ನಿನ್ನ ಹಿಡಿಯೋ
    ಪ್ರತಿ ಪ್ರಯತ್ನದಲ್ಲಿ ಮತ್ತೆ ಐ ಮಿಸ್ ಯು..!!!

    ReplyDelete
  4. very nice maga..............


    i miss you...!

    ReplyDelete
  5. nice one.... i thnk all line for her only?

    ReplyDelete
  6. ಅಭಿನ೦ದನೆಗಳು ರಾಘು, ಇರಬೇಕು ಎನಿಸಿದಲ್ಲಿ ಮಾತ್ರ ಮಿಸ್ ಯೂ ಎ೦ದರೆ ಸ್ವಾರ್ಥವಾದಿತೇನೊ!!

    ReplyDelete
  7. ಸು೦ದರ ಸಾಲುಗಳಿಗೆ ಅಭಿನ೦ದನೆಗಳು ದಿಲೀಪ್ :)

    ReplyDelete
  8. ಗುರುಮೂರ್ತಿ ಸರ್... ಸಿಕ್ಕಿಯೊ, ಜೊತೆಗಿದ್ದೂ ಮಿಸ್ ಮಾಡಿಕೊಳ್ಳಬಹುದು ಎ೦ಬ ನಿಮ್ಮ ಈ ಅಭಿಪ್ರಾಯ ಪ್ರೀತಿಗಿರಬಹುದಾದ ಆಳವನ್ನು ಸಾರುತ್ತಿದೆ. ಅಭಿನ೦ದನೆಗಳು :)

    ReplyDelete
  9. ಧನ್ಯವಾದಗಳು ನಾಗೇ೦ದ್ರ, ಇಷ್ಟು ಹೇಳಬಲ್ಲೆ "All these lines are for some one special" :)

    ReplyDelete
  10. ಧನ್ಯವಾದ ಸುಬ್ಬಣ್ಣ!!

    ReplyDelete
  11. ಪರಮ್....

    ಸೊಗಸಾಗಿದೆ...!!
    ಅಂಥಹ ಸಮಯಗಳೇ ಹಾಗೆ..

    ಭಣ ಭಣ ಎನಿಸುವ
    ಬರಿದಾದ
    ಭಾವಗಳಲ್ಲೂ..
    ಬಂದುಬಿಡುವೆಯಲ್ಲೆ...
    ನೆನಪಾಗಿ...
    ಕ್ಷಣ, ಕ್ಷಣದಲ್ಲಿ
    ನನ್ನ
    ತುಟಿಯ ಮುಗುಳ್ನಗುವಾಗಿ...

    ಚಂದದ ಕವನಕ್ಕೆ ಅಭಿನಂದನೆಗಳು...

    ReplyDelete
  12. ತುಂಬಾ ಚೆನ್ನಾಗಿದೆ ಮಿಸ್ ಆಗದೆ ಬೇಗ ಬಂದು ಸೇರಲೆಂದು ಆಶಿಸುತ್ತೇನೆ

    ReplyDelete
  13. ಪರಮೇಶ್ವರ,
    ತುಂಬಾ ಸುಂದರ ಭಾವಗಳನ್ನು ಹೊಮ್ಮಿಸಿದ ಕವನ .
    ಮನದನ್ನೆಯನ್ನು ' ಮಿಸ್' ಮಾಡಿಕೊಂಡಿದ್ದನ್ನು ನೀವು ಅಕ್ಷರಗಳಲ್ಲಿ ಮೂಡಿಸಿದ ಪರಿ ತುಂಬಾನೇ ರೊಮ್ಯಾಂಟಿಕ್ ಆಗಿದೆ .' ನಿಮ್ಮ ಹುಡುಗಿ ' ಇದನ್ನೋದಿ ನಿಮ್ಮನ್ನು ಬಹಳ ' ಮಿಸ್' ಮಾಡ್ಕೋಬಹುದು !

    ReplyDelete
  14. ಪರಮೇಶ್ವರ್,

    ಕವನ ಬಲು ಚೆನ್ನಾಗಿದೆ...ನೀವು ನಿಮ್ಮಾಕೆಯನ್ನು ಎಲ್ಲೆಲ್ಲಿ ಬಯಸುವಿರೋ..ಅಲ್ಲೆಲ್ಲಾ ಅವರು ಮಿಸ್ ಆಗಿರುವುದು ಮತ್ತು ಅವರು ಮಿಸ್ ಆಗದೇ ಸಿಗಲಿ ಎಂದಷ್ಟೇ ಹಾರೈಸಬಹುದು..

    ReplyDelete
  15. ತುಂಬಾ ಮಿಸ್ ಮಾಡ್ತಿದೀರ.... ನಿಮ್ಮ ಮಿಸ್ ಕೂಡ ನಿಮ್ಮನ್ನು ಇನ್ನಷ್ಟು ಮಿಸ್ ಮಾಡಿ ತಡೆಯಲಾಗದೆ ಬಂದು ನಿಮ್ಮನ್ನು ಸೇರಲಿ ಎಂದು ಆಶಿಸುತ್ತೇನೆ.

    ReplyDelete
  16. ಪ್ರಕಾಶಣ್ಣ,
    ಸು೦ದರ ಸಾಲುಗಳೊ೦ದಿಗಿನ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು :)

    ReplyDelete
  17. ಮನಸು,
    ತು೦ಬುಮನಸಿನ ನಿಮ್ಮ ಹಾರೈಕೆಗೆ ಧನ್ಯವಾದಗಳು!

    ReplyDelete
  18. ಚಿತ್ರಾ,
    ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು :)

    ReplyDelete
  19. ಶಿವು,
    ಹಾರೈಕೆಯೊ೦ದಿಗಿನ ಮೆಚ್ಚುಗೆಗೆ ಧನ್ಯವಾದಗಳು :)

    ReplyDelete
  20. ಜ್ಯೋತಿ,
    ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಈ ಆಶಯವಾದರೂ ಅವಳನ್ನು ತಲುಪಿದರೆ ನಾನು ಧನ್ಯ!! :P

    ReplyDelete
  21. ಎಲ್ಲಿ ಹೋದರೂ ಮಿಸ್ ಮಾಡ್ಕೋಳ್ತಿದ್ದೀರಾ...
    ಅವಳ ಕಡೆಯಿಂದ ಒಂದು ಮಿಸ್ಡ್ ಕಾಲ್ ಆದಷ್ಟು ಬೇಗ ಬರಲಿ..... :)

    ReplyDelete
  22. ಆನ೦ದ.. ಉಪಾಯ ಏನೊ ಚೆನ್ನಾಗಿದೆ ಆದರೆ ಬರಿ ಮಿಸ್ಡ್ ಕಾಲ್ ಗೆ ಅಷ್ಟು ಶಕ್ತಿ ಇದೆ ಅನ್ನಿಸ್ತಿಲ್ಲ!!

    ReplyDelete
  23. ಕವನ ಬಹಳ ಚೆನ್ನಾಗಿದೆ.. ಕೊನೆಯ ಸಾಲಲ್ಲಿ ನೋವೇಕಿದೆ?

    ReplyDelete
  24. ಧನ್ಯವದಗಳು.. ಕೊನೆಸಾಲಲ್ಲಿರೋದೇನೋ ಕೈ ಗೋಡೆಗೆ ತಾಗಿದ ನೋವು!!

    ReplyDelete
  25. ಹಾಯ್ ಪರಮ್..ನನ್ನ ಒಂದು ಸ್ನೇಹಿತ ಅಂದ, ನಿಮ್ಮ ಬ್ಲಾಗ್ ಚನ್ನಾಗಿರುತ್ತೆ, ಓದು ಅಂತ..and i started..' miss u" ತುಂಬಾ ಚನ್ನಾಗಿದೆ,ದಿನನಿತ್ಯ ನಾವು ಯಾರನ್ನೋ ಮಿಸ್ ಮಾಡ್ಕೊಳ್ಳೋದು..100% true..
    ಅದಕ್ಕೆ ನಾನೂ ಹೇಳ್ತಾ ಇರ್ತೀನಿ...
    "ನೀನೊಂದು ದಡದಲ್ಲಿ ..ನಾನೊಂದು ದಡದಲ್ಲಿ..
    ನಡುವೆ ಮೈ ಚಾಚಿರುವ ವಿರಹ ಕಡಲು..
    ಯಾವ ದೋಣಿಯ ಏರಿ..ಎಂದು ಬರುವುದೋ ಕಾಣೆ..
    ನೀನಿರುವ ತಡಿಯಲ್ಲಿ..ನನ್ನ ಬಿಡಲು..."
    and off course..missing some one is our..right..wright??

    ಸಂಪದಾ..

    ReplyDelete
  26. ಹಾಯ್ ಸ೦ಪದಾ, ನನ್ನ ಬ್ಲಾಗಿಗೆ ಸ್ವಾಗತ. ಹಕ್ಕು, ಅನಿವರ್ಯ, ಸಹಜ ಹೀಗೆ ಯಾವ ಅರ್ಥಕೊಟ್ಟರೂ ಮಿಸ್ ಮಾಡುವುದ೦ತೂ ಸತ್ಯ. ಸು೦ದರ ಸಾಲುಗಳೊ೦ದಿಗಿನ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  27. ಪರಮ just superb ...... ತುಂಬಾ ಮುದ್ದಾಗಿದ್ದು...

    ReplyDelete