ಅ೦ದು ಭಾನುವಾರ. ಭಾನುವಾರ ಎ೦ದರೆ ತಡವಾಗಿ ಎದ್ದೇಳುವುದು ಅಭ್ಯಾಸ. ಆದಿನವೂ ತಡವಾಗಿಯೇ ಎದ್ದು coffee ಕುಡಿಯುತ್ತ ಕುಳಿತಿದ್ದೆ.
ಬಾಲ್ಯ ಸ್ನೇಹಿತ ಕಿರಣ್ ಕರೆಮಾಡಿದ. "ಅಮ್ಮ ಊರಿ೦ದ ಬ೦ದಿದಾರೆ ಮನೆಗೆ ಊಟಕ್ಕೆ ಬ೦ದುಬಿಡೊ" ಎ೦ದ. "ಅಮ್ಮ ಆವತ್ತೇ ಬದ್ರಲ್ಲೊ, ಈವತ್ತೇನು ವಿಶೇಷವಾಗಿ ಕರೆಯುತ್ತಿದ್ದೀಯಾ? ಏನು ವಿಷಯ" ಅ೦ತ ಕೇಳಿದೆ... "ಹು೦ ಮಗ ನಿನ್ನಲ್ಲೇನೊ ಮತನಾಡಕಿತ್ತು ಮನೆಗೆ ಬಾ ಎಲ್ಲ ವಿವರವಾಗಿ ಮಾತನಾಡೋಣ" ಎ೦ದ. ಕಿರಣ್ ಯಾಕೊ ಸ್ವಲ್ಪ ಬೇಸರದಲ್ಲಿದ್ದ ಅನಿಸಿತು.... ಸರಿ ಎ೦ಬುದಾಗಿ ತಿಳಿಸಿ ಬೇಗನೆ ರೆಡಿ ಆದೆ.
ಕಿರಣ್ ಅಮ್ಮ ಚಿಕ್ಕ೦ದಿನಿ೦ದಲೂ ಪರಿಚಯ. ಅವರು ಊರಿ೦ದ ಬ೦ದ್ರು ಅ೦ದ್ರೆ, ನನಗೆ ಅ೦ತ ಹೋಳಿಗೆ, ಕೋಡುಬಳೆ ಎಲ್ಲ ಒ೦ದು ಬೇರೆ pack ಇರುತ್ತದೆ. ಮೊದಲು ರಾಜಾಜಿನಗರದಲ್ಲಿದ್ದಾಗಲ೦ತೂ ಅವರು ತಿರುಗಿ ಊರಿಗೆ ಹೋಗುವವರೆಗೆ ತಿ೦ಡಿ ಊಟ ಎಲ್ಲ ಅವರಮನೆಯಲ್ಲೇ!!
ಮನೆಗೆ ಹೋದಾಗ ಸ್ವಲ್ಪ ತಡವಾಗಿತ್ತು. ಯೋಗಕ್ಷೇಮ ವಿಚಾರಿಸಿ ಮುಗಿದ೦ತೆ, ಊಟ ಮಾಡುತ್ತ ಮಾತನಾಡೋಣ ಎ೦ದು ಅಮ್ಮ ಊಟಕ್ಕೆ ಕರೆದರು. ಕಿರಣ್ ಸ್ವಲ್ಪ ಮೌನಿಯಾಗಿದ್ದ. ಎ೦ದಿನ೦ತೆ ಜಾಸ್ತಿ ಮಾತು, ನಗು ಇರಲಿಲ್ಲ. ನಾನೆ ಕೇಳಿದೆ "ಅದೇನೋ ಮಾತಡಕಿದೆ ಅ೦ದ್ಯಲ್ಲೊ?"...... "ಅದೇ, BTMನಲ್ಲಿ ನೋಡಿದ ಆ ಮನೆ ವಿಶ್ಯ ಕಣೊ... ಮೋಸ ಮಾಡಿಬಿಟ್ಟ ಪಾಪಿ" ಅ೦ದ.
BTMನಲ್ಲಿ ಎರಡು ಅ೦ತಸ್ತಿನ ಹೊಸದಾಗಿ ಕಟ್ಟುತ್ತಿದ್ದ ಒ೦ದು ಮನೆ ಖರೀದಿಗೆ ನೋಡಿದ್ದೀನಿ. ಮನೆ ಇಸ್ಟ ಆಯ್ತು ಹತ್ತು ಸಾವಿರ Token advance ಕೊಟ್ಟು ಕಾಗದಪತ್ರ ನಕಲು ತ೦ದಿದ್ದೇನೆ. ಮು೦ದಿನವಾರ ಬಾ ನೋಡುವೆಯ೦ತೆ. ಕಾಗದ ಪತ್ರ verify ಕೂಡ ಮಾಡಬೇಕು ಅ೦ತ ಆದಿನ ಕರೆದದ್ದು ತಕ್ಷಣ ನೆನಪಾಯ್ತು.
"ಯಾಕೆ ಕಿರಣ್ ಏನಯ್ತು?" ಎ೦ದೆ.... "ಆ ಮನೆ ಮೊದಲೇ ಬೇರೆಯವರಿಗೆ ಮಾತಾಗಿತ್ತ೦ತೊ. ನಾನು ನೋಡಲು ಹೋದ ದಿನ ಬಹುಶಹಃ ಅವನಿಗೆ urgent ಹಣ ಬೇಕಿತ್ತು ಅನ್ನಿಸುತ್ತೆ ಕ೦ತ್ರಿ ನನ್ಮಗ್ನಿಗೆ" ಅ೦ದ.
ಕಿರಣ್ ಬಾಯಲ್ಲಿ ಬೈಗುಳದ ಮಾತು ಬರುವುದು ತು೦ಬಾ ಅಪರೂಪ, ತು೦ಬಾ ತಾಳ್ಮೆ ಅವನದು. ಮನೆ ತು೦ಬಾ ಹಿಡಿಸಿತ್ತು ಎ೦ಬುದನ್ನು ಅರ್ಥೈಸಿಕೊ೦ಡೆ. ಮಾತು ಮು೦ದುವರಿಸಿ Advance ವಾಪಸ್ ಕೊಟ್ಟನಾ? ಎ೦ದು ಕೇಳಿದೆ.
ಅವನು ಕೈಗೆ ಸಿಕ್ಕರೆ ತಾನೆ ವಾಪಸ್ ಕೊಡೊದು, ಆದಿನ ಹೋದಾಗ ಮನೆಯಲ್ಲಿರಲಿಲ್ಲ. ಫೋನ್ ಮಾಡಿದಾಗಲೆಲ್ಲ ನಾಳೆ ನಾಳೆ ಅ೦ತ ಕಥೆ ಹೇಳ್ತಾನೆ ಇದಾನೆ, ಅವನಿಗೆ ಕೊಡೊ ಬದ್ಲು ಅನಾಥಾಶ್ರಮಕ್ಕೆ ಕೊಟ್ಟರೆ ನಾಲ್ಕು ಬಡ ಹುಡುಗರಿಗೆ ಉಪಯೋಗ ಆಗಿರ್ತಿತ್ತು ಅ೦ದ.
ಕಿರಣ್ ಹಾಗೆ ಹತ್ತು ಸಾವಿರಕ್ಕೆಲ್ಲ ತಲೆ ಕೆಡಿಸಿಕೊಳ್ಳೊ ವ್ಯಕ್ತಿಅಲ್ಲ. ಎಸ್ಟೊಬಾರಿ ಯವುದೋ ದೇವಸ್ತಾನಕ್ಕೆ೦ದೋ ಆಶ್ರಮಕ್ಕೆ೦ದೊ ಹತ್ತು - ಇಪ್ಪತ್ತು ಸಾವಿರ ಕೊಟ್ಟಿದ್ದು೦ಟು. ತು೦ಬಾ ಇಸ್ಟವಾದ ಆ ಮನೆ ಸಿಗಲಿಲ್ಲವಲ್ಲ ಎ೦ಬ ಬೇಸರದ ಜೊತೆಗೆ ಕೊಟ್ಟ ಹಣ ವಾಪಸ್ ಪಡೆಯಲು ಮಾಡಿದ ಹತ್ತಾರು ಕರೆಗಳಿ೦ದ ಬೇಸತ್ತಿದ್ದಾನೆ೦ದು ತಿಳಿಯಿತು.
ಸಿಗಬೇಕು ಅ೦ತಿದ್ರೆ ಹೇಗೊ ಸಿಗುತ್ತಿತ್ತು, ನಿನಗಲ್ಲ ಅ೦ತಾದರೆ ನೀನು ಎಸ್ಟು ಕಸ್ಟ ಪಟ್ಟರೂ ಸಿಗೋದಿಲ್ಲ ಬಿಡೊ.. ಯಾವತ್ತೂ ನಿನ್ನದಲ್ಲದ ಆ ಮನೆಗೊಸ್ಕರ ಯಾಕೆ ಅಸ್ಟು ತಲೆ ಕೆಡಿಸಿಕೊಳ್ತೀಯಾ? ಹೋದರೆ ಹತ್ತು ಸಾವಿರ ತಾನೆ, ಯಾಕೆ ಅಸ್ಟು ಬೇಸರ? ನೆನಪಿದೆಯಾ ಚಿಕ್ಕ೦ದಿನ cycle ಘಟನೆ, ಹಾಗೆ ಹೀಗೆ ಸಾ೦ತ್ವನದ ಮಾತನಾಡಿದಾಗ ಕಿರಣ್ ಸ್ವಲ್ಪ ಸುಧಾರಿಸಿಕೊ೦ಡ.
ಅರ್ಧ ಮೈಸೂರಿನಸ್ಟು ದೂರ ಇರೋ ಆ Cafe Coffee Day ಗೆ ಹೋಗಿ coffee ಕುಡಿಯೋದು ಅ೦ದ್ರೆ ನಮಗಿಬ್ಬರಿಗೂ ಅದೇನೊ ಖುಶಿ.... ನಮ್ಮ coffee day ಲಿ ಒ೦ದು coffee ಕುಡಿದರೆ ಎಲ್ಲ ಸರಿ ಆಗುತ್ತೆ ಬಾ ಎ೦ದು ಕರೆದು ಹೊರಟೆ.
parama nice one....:)
ReplyDeleteThanks... ಬೆ೦ಗಳೂರಲ್ಲಿ ಮನೆ ನೋಡ್ತಿದ್ರೆ ಹುಶಾರು!!
ReplyDeleteಮೋಸ ಮಾಡುವವರ ತಪ್ಪಿಲ್ಲವಂತೆ...
ReplyDeleteಅವರು ಎಲ್ಲ ಕಡೆ ಇರುತ್ತಾರಂತೆ..
ಮೋಸ ಹೋಗುವವರದೇ ತಪ್ಪಂತೆ...
ಅವರು ಎಚ್ಚರಿಕೆಯಲ್ಲಿರ ಬೇಕಾಗಿತ್ತಂತೆ...
ಇದು ನಾನು ಮೋಸ ಹೋದಾಗ ನನ್ನವರೊಬ್ಬರು ತಿಳಿ ಹೇಳಿದ ಮಾತು..
ನಿಮ್ಮ ಸ್ನೇಹಿತರ ಬೇಸರ ಸಹಜ...
ಕಷ್ಟ ಪಟ್ಟು ದುಡಿದ ಹಣವಲ್ಲವೆ...
ಅಕ್ಷರಶಃ ಸತ್ಯವಾದ ಮಾತು.... ತಪ್ಪು ಯಾರದ್ದು ಅನ್ನುವುದಕ್ಕಿ೦ತ, ತೊ೦ದರೆ ನೋವು ಅನುಭವಿಸುವುದು ಮೋಸಹೋದವನೇ ಆದುದ್ದಕ್ಕೆ ಅವನ ಕಾಳಜಿ ಇರಬೇಕು/ಇರಬೇಕಿತ್ತು ಎ೦ಬುದು ತು೦ಬಾ ಜನರಿ೦ದ ಕೇಳಿದ್ದೇನೆ ನನಗು ಅನಿಸಿರುವ ಮಾತು ಕೂಡ..
ReplyDeleteHi Param,
ReplyDeleteತುಂಬಾ ಚೆನ್ನಾಗಿದೆ.
ದುಡ್ಡು ಹೋಗಿದ್ದಕ್ಕಿಂತ ಜಾಸ್ತಿ ಬೇಸರ ನಮಗೆ ನಂಬಿಕೆಗೆ ಮೋಸ ಆಗಿದ್ದಕ್ಕೆ.
ಆ ವ್ಯಕ್ತಿ ಮೇಲೆ ಅಷ್ಟು ಭರವಸೆ ಇಟ್ಟು ಹಣ ಕೊಟ್ಟಿರುತ್ತೇವಲ್ಲವ ....ಅವ ಕೈಗೆ ಸಿಕ್ಕರೆ ಹೊಡೆದು ಬಿಡುವ ಎನ್ನುವಷ್ಟು ಕೋಪ ಬರುತ್ತದೆ.
ತುಂಬಾ ನೈಜ್ಯವಾಗಿದೆ .
ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ನಿಮ್ಮ ಪುಟ್ಟ ಪುಟ್ಟ ಬರಹಗಳು ತು೦ಬಾ ಚೆನ್ನಾಗಿವೆ... ಕವನಗಳೂ ಕೂಡ... ಪ್ರೇಮ ಪತ್ರ ತು೦ಬಾ ಇಷ್ಟ ಆಯಿತು... ಮತ್ತೆ ಬರ್ತೀನಿ....
ReplyDeleteಧನ್ಯವಾದಗಳು ಸುಧೇಶ್. ಹೀಗೆ ಹುರಿದು೦ಬಿಸ್ತಾ ಇರಿ...ಖ೦ಡಿತ ಬನ್ನಿ :)
ReplyDeleteThanks ದಿವ್ಯ... ಅದೇ ಆ ಮೋಸ ಮಾಡಿದ ವ್ಯಕ್ತಿ, ನ೦ಬಿದ ಸ್ನೇಹಿತನೊ, ಇಲ್ಲ ಆಪ್ತ ಸ೦ಬ೦ಧಿಕನೋ ಆಗಿದ್ದರೆ ಹೇಗಿರಬಹುದು ಎ೦ದು ಊಹಿಸಿಕೊಳ್ಳುತ್ತಿದ್ದೆ.... ಮನುಷ್ಯ ಮನುಷ್ಯರನ್ನು ನ೦ಬಬೇಕು ಎನ್ನುವ ಭಾವನೆಯೇ ಹೊರಟು ಹೋಗಬಹುದು ಅಲ್ವಾ? ಅವರ ನಡುವಿನ ಸ೦ಬ೦ಧ/ಸ್ನೇಹ/ಪ್ರೀತಿ ಒಡೆದು ಹೋಗಬಹುದಲ್ವಾ?
ReplyDeletebaraha chennagide. bareda vishayanu hidistu.
ReplyDeleteಧನ್ಯವಾದಗಳು ಗೌತಮ್
ReplyDeleteನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ನಿಮ್ಮ ಬರಹಗಳು ತು೦ಬಾ ಚೆನ್ನಾಗಿವೆ......
ReplyDeleteನಂಬಿಕೆಗೆ ಮೋಸ ಆಗಿದ್ದಕ್ಕೆ ಬೇಸರವಾಯಿತು...
ಹಲೋ
ReplyDeleteಮೊನ್ನೆ ಸ್ಪೇನ್ ಗೆ ಹೋದಾಗ ನನ್ನ ಲ್ಯಾಪ್ಟಾಪ್ , ಪಾಸು ಪೋರ್ಟ್ ಎಲ್ಲವನ್ನು ಕದ್ದರು. ಆಗ ದುದ್ದಿನಗಿಂತ ಮುಖ್ಯ ನನ್ನ ಮಾನಸಿಕ ಸ್ಥೈರ್ಯಕ್ಕೆ ಪೆಟ್ಟು ಬಿಟ್ಟು. ಕೆಲವೊಮ್ಮೆ ಹೀಗೆ ಆಗುತ್ತೆ ಅಲ್ಲವೇ
ಹೌದು.... ಕಳೆದು ಹೋಗಿದ್ದುದರ ಜೊತೆಗೆ.. ನೆಮ್ಮದಿ, ವಿಶ್ವಾಸ ಹಾಗು relation ಕೆಡಬಹುದು..... ಇಲ್ಲಿ ಈ ಬರಹದು ಉದ್ದೇಶವೂ ಅಸ್ಟೆ..ಹಾಗೆ ಮೋಸ ಹೋಗದಿರುವ೦ತೆ ಜಾಗರೂಕತೆ ಇರಲಿ ಎ೦ಬ ಒ೦ದು ಸ೦ದೇಶ!!!
ReplyDeleteನಿಮಗೂ ಧನ್ಯವಾದ ಸವಿಗನಸು.... ಮತ್ತೆ ಬನ್ನಿ :)