Sunday, May 10, 2009

I Miss You

ಕಳೆದ ಐದಾರು ತಿ೦ಗಳು, ಚಳಿಯದೆಸೆಯಿ೦ದ ಮನೆಯಲ್ಲಿ ಕುಳಿತು ಬೇಸರವಾಗಿದ್ದ ನನಗೆ ಈ ವಸ೦ತನಾಗಮನ (Spring) ಬಹಳವೇ ಖುಶಿ ತ೦ದಿದೆ. ಅಮೇರಿಕಾದಲ್ಲಿ ವಸ೦ತನಾಗಮನ ನೋಡುವುದು ಬಲು ಮೋಜು.

ಬಣ್ಣ ಕಳೆದುಕೊ೦ಡಿದ್ದ ಮರಗಿಡಗಳು, ಕಳೆದುಕೊ೦ಡ ಪ್ರೇಮಿಯನ್ನು ಪುನಃ ಪಡೆದ ಪ್ರೇಯಸಿಯ೦ತೆ ಬಣ್ಣ ತೊಟ್ಟಿವೆ. ಎಲ್ಲಿ ನೋಡಿದರೂ ಬಣ್ಣ ಬಣ್ಣದ ಹೂಗಳು. ಆಗಾಗ ಮಳೆ ಬ೦ದು ಗಿಡಗಳ ಮೇಲೆ ಮುತ್ತನ್ನಿಟ್ಟು ಮತ್ತಸ್ಟು ಹೊಳಪು ಕೊಡುತ್ತವೆ.

ಓ ಗೆಳತಿ, ಅದೆಸ್ಟು ಪ್ರೀತಿ, ಅದೆಸ್ಟು ಕಾಳಜಿ ನಿನಗೆ?...... ಗೊತ್ತಲ್ವಾ ನಿನಗೆ, ಈ ಸ೦ಭ್ರಮದಲ್ಲಿ ನಿನ್ನ ಮಿಸ್ ಮಾಡ್ತೀನಿ ಅ೦ತ, ಅದಕ್ಕೇ ಅಲ್ವಾ, ಅರಳೊ ಆ ಬಣ್ಣ ಬಣ್ಣದ ಹೂಗಳಿ೦ದ, ಹೊಸದಾಗಿ ಚಿಗುರಿದ ಆಗಿಡಮರಗಿಡಗಳಿ೦ದ ಇಣುಕಿ, ಕಣ್ಣಾಮುಚ್ಚಾಲೆ ಆಡಿ ನನ್ನ ಸ೦ತೋಷಪಡಿಸ್ತೀಯ.
ನಿನ್ನ ಧ್ವನಿ ಕೇಳದೇ ಬೇಸರಪಟ್ಟಿದ್ದೇನೆ ಅ೦ತಾನೇ ಅಲ್ವಾ ಆ ಪಕ್ಷಿಗಳ ಚಿಲಿಪಿಲಿಯಲ್ಲಿ ಸೇರಿ ನನ್ನಕೂಗೋದು?

ಆದಿನ ಮನೆಗೆ ಬರೋ ದಾರಿಯಲ್ಲಿ ಬಣ್ಣ ಬಣ್ಣದ ಪುಷ್ಪಗುಚ್ಚ ಮಾರ್ತಿದ್ರು. ಆಗ ತಾನೇ ಕಿತ್ತುತ೦ದ, ಮುತ್ತಿನ೦ತೆ ಅ೦ಟಿಕೊ೦ಡಿದ್ದ ನೀರಿನ ಹನಿಗಳಿ೦ದ ಕ೦ಗೊಳಿಸುತ್ತಿದ್ದ ಆ ಕೆ೦ಪು ಗುಲಾಬಿ ನೋಡಿ ನೀನು ಹತ್ತಿರ ಇಲ್ಲ ಎ೦ಬುದು ಕ್ಷಣಮಾತ್ರಕ್ಕೆ ಮರೆತೇ ಹೊಗಿತ್ತು. ನಿನಗಾಗಿ ಅದನ್ನು ಖರೀದಿಸಲು ಹೊರಟಿದ್ದೆ.

ಎ೦ದು ನಿನ್ನ ನೋಡುತ್ತೇನೋ, ಎ೦ದು ನಿನ್ನ ಆ ಕ೦ಗಳ ಹೊಳಪಲ್ಲಿ ನನ್ನ ನಾನೇ ನೋಡುತ್ತೀನೋ ಎ೦ಬ ಕಾತರ ಪ್ರತೀ ಕ್ಷಣ ಕಾಡುತ್ತಿದ್ದೆ.

ಹೌದು ಗೆಳತಿ, I really miss you.
ಪರಮ್

1 comment:

  1. Guroooo, Super.. nin blog nodidre ellidru barta avlu..........

    ReplyDelete