Monday, April 27, 2009

ಕ್ಷಮೆಯಿರಲಿ




ನೀನಾರೊ ನಾನರಿಯೆ, ಹೇಗಿಹೆಯೋ ನಾ ತಿಳಿಯೆ,
ನೀ ಬರೆವ ಅಕ್ಷರವೇ ನಿನಮಾತು, ನಿನನಗುವು.
ಎದುರಿನಲಿ ನೀನಿಲ್ಲ, ಮುಖಭಾವ ತಿಳಿದಿಲ್ಲ,
ನನಗರ್ಥವಾಗದಿರೆ, ನನ್ನಲ್ಲಿ ಕ್ಷಮೆಯಿರಲಿ.

ಮಾತನಾಡುವಾಸೆ, ಮನದಾಳ ತಿಳಿವಾಸೆ,
ನಿನದನಿಯ ಇ೦ಪರಿತು, ಧ್ವನಿಗೂಡುವಾಸೆ.
ಮನದಾಸೆ ಫಲಿಸಿಲ್ಲ, ಮನದಾಳ ತಿಳಿದಿಲ್ಲ,
ಕಾರಣವ ನೀ ಬಲ್ಲೆ, ನನ್ನಲ್ಲಿ ಕ್ಷಮೆಯಿರಲಿ.

ನಿನ್ನೊಮ್ಮೆ ನೋಡುವಾಸೆ, ಜೊತೆ ಸಮಯ ಕಳೆವಾಸೆ,
ನಿನ್ನ ಅ೦ಗೈಮೇಲೆ ನನ್ನ ಹೆಸರ ಬರೆವಾಸೆ.
ದೂರಿಯಿದು ಕೊಲುತಿಹುದು, ಮನವನದು ಸುಡುತಿಹುದು,
ತಡವಾಗಿ ನಾ ಬರಲು, ನನ್ನಲ್ಲಿ ಕ್ಷಮೆಯಿರಲಿ.
..

No comments:

Post a Comment