ಚಿಕ್ಕದಕೂ ಕಿತ್ತಾಡಿ,
ಎಳೆದಾಡಿ ಹೊಡೆದಾಡಿ,
ಮರುಗಳಿಗೆ ಒ೦ದಾಗಿ
ಆಡಿ ಕುಣಿದು ಕುಪ್ಪಳಿಸಿದ,
ದ್ವೇಷ ಅಸೂಯೆ
ಬಿಗುಮಾನಗಳ ಹ೦ಗಿರದ
ಮತ್ತೆ ಮತ್ತೆ ಬಯಸುವ
ಬಾಲ್ಯದ ಆ ಕ್ಷಣಗಳೇ ನೆನಪು!
ಸ೦ಜೆ ಸವಿಗಾಳಿಯಲಿ
ಏಕಾ೦ತ ಕೊಲುತಿರಲು,
ಮಿ೦ಚಿನವೇಗದಿ ಹಿ೦ದೋಡುವ
ಗಡಿಯಾರದ ಬೆನ್ನು ಹಿಡಿದು,
ಕೆಲಕಾಲ ಅಲೆದಾಡಿ
ಸವಿದ ಆ ಕ್ಷಣಗಳೇ ನೆನಪು!
ಕುಳಿತಲ್ಲೇ ಕಳೆದುಹೋಗಿ
ತಿಳಿಯದೇ ಮುಗುಳ್ನಕ್ಕು
ವಾಸ್ತವಕೆಳೆದ ದೂರವಾಣಿಯನು
ಸಿಟ್ಟಿನಲ್ಲಿ ಗೊಣಗುವ೦ತಾಗಿಸಿದ,
ಸು೦ದರ ಆ ಕ್ಷಣಗಳೇ ನೆನಪು!
ಅತೀ ಇಷ್ಟದ ಕಥೆಗಾರನೂ
ಬರೆಯದ ಕಥೆಯೊ೦ದ
ಮನಸಾರೆ ಸವಿಯುತಿರೆ,
ಪುಸ್ತಕವೇ ಕೈಜಾರಿ ಎಚ್ಚೆತ್ತು
ತುಸುನಾಚಿ ನಸುನಗಿಸಿದ
ಮಸುಕಾಗದ ಆ ಕ್ಷಣಗಳೇ ನೆನಪು!
ಪರಮ್,ತುಂಬಾ ಚೆನ್ನಾಗಿದೆ ನೆನಪಿನ ಮಿಳಿತ, ಅದರ ಸೆಳೆತೆ
ReplyDeleteGOOD! balya mareyakkagalla enanteeri ?
ReplyDeleteWaaH...!!
ReplyDeletechandada kavana...
baalya nenapaayitu...!!
ಆಹ್ ನೈಸ್ :)
ReplyDeleteಅಭಿನ೦ದನೆಗಳು ಸ್ನೇಹಿತರೆ, ನೆನಪುಗಳೇ ಹಾಗೆ, ಮರೆಯಲ್ಲ, ಮರೆಯಬೇಕು ಅನ್ಸೋದು ಇಲ್ಲ, ಮತ್ತೆ ಮತ್ತೆ ಮೆಲುಕುಹಾಕಿ ಸ್ವಾದಿಸಬಹುದು :)
ReplyDeleteparamanna..... kavan superb.........
ReplyDeleteಚೆನ್ನಾಗಿದೆ ಈ ಕವಿತೆ, ಕಥೆಗಾರನ ಎಲ್ಲಾ ಕಥೆಗಳಿಗಿಂತ ನಿಜವಾಗ್ಲೂ ಮಧುರವಾದ್ದು ನೆನಪುಗಳೇ..:)
ReplyDeleteಅಭಿನ೦ದನೆಗಳು ರ೦ಜಿತ್, ಅಭಿನ೦ದನೆಗಳು ಜ್ಯೋತಿ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ. :)
ReplyDeleteTumbaa Sundara Kavana Parama...Nenapugalu nijavaagiyu madura...tumbaa chennagide....
ReplyDeleteಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.
ReplyDeletechennagide Param..nenapu..savi savi nenapu..yedeyaladinda...
ReplyDeleteRaaghu
ಮುಸ್ಸ೦ಜೆ ಇ೦ಪು ,
ReplyDeleteಮಧುರವಾಗಿದೆ..
nice
ReplyDelete