
ಮರಗಿಡಕೆ ಉಡಿಸಿರಲು ಬಗೆ ಬಗೆಯ ಬಣ್ಣ.
ಸುತ್ತೆಲ್ಲಿ ನೋಡಿದರೂ ಸೆಳೆವುದದು ಕಣ್ಣ!
ಉದುರೆಲೆಯು ಹಾಸಿಹುದು ಎಲ್ಲಿ ನೋಡಿದರಲ್ಲಿ.
ಮರವು ನೊ೦ದ೦ತಿಹುದು ವಿರಹವೇದನೆಯಲ್ಲಿ!!
ಕಳೆದುಕೊಳ್ಳುವ ನೋವು ಮರಕಿ೦ದು ಕಾಡಿಹುದೇ?
ಹೊಸಚಿಗುರ ಕನಸಿನಲಿ ತವಕದಲಿ ಕಾದಿಹುದೇ?
ಮರಳಿ ಬರುವುದು spring ಮರಕು೦ಟು ನ೦ಬಿಕೆ!
ಆದರೂ ತಪ್ಪದು ಚಳಿ ಹಿಮದ ಬಿಳಿ ಹೊದಿಕೆ!!
ಉದುರೆಲೆಗೆ ಸಡಗರವೇ, ಮತ್ತೇಕೆ ಈ ಬಣ್ಣ?
ಬಣ್ಣದಾ ನಗುವಲ್ಲಿ ಮುಚ್ಚುತಿಹುದೇ ನೋವ?
ಉದುರು ಚಿಗುರಲೆ ನಾವು ಸವಿವ೦ತೆ ಈ ಸೊಬಗು...
ನೋವು ನಲಿವಿನ ಬಾಳ ಸ೦ತಸದಿ ನೀ ಸಾಗು!!
..
ಪರಮೇಶ್ವರ ಸರ್,
ReplyDeleteನಿಮ್ಮ ಕವನ ತುಂಬಾ ಚೆನ್ನಾಗಿದೆ. ಬಣ್ಣಗಳು, ಹಣ್ಣಾದ ಉದುರೆಲೆ, ಕನಸಿನ ಚಿಗುರೆಲೆ, ಇತ್ಯಾದಿಗಳ ವಿಚಾರವಾಗಿ ಚೆನ್ನಾಗಿ ಬರೆದಿದ್ದೀರಿ...ಫೋಟೊ ಕೂಡ ಚೆನ್ನಾಗಿದೆ..
Tumbaa chennagide..photo superb...:)
ReplyDeletesakat agi iddu, photo is super :)
ReplyDeleteHey Param.... mast iddo... marada novu nalivannella neene anubhavisi bareda haagiddu... marakku manasiddu annodu toriskottide.. adbuta
ReplyDeleteಸ್ನೇಹಿತರೆ... ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ತು೦ಬಾ ತು೦ಬಾ ಧನ್ಯವಾದಗಳು :)
ReplyDeleteChennagide.. :)
ReplyDeleteತುಂಬಾ ಸುನದರ ಕವನ, ಅದಕ್ಕೆ ಒಪ್ಪುವ ಫೋಟೋ,
ReplyDeleteಚಳಿಗಾಲಕ್ಕೆ ಭವ್ಯ ಸ್ವಾಗತ
ಪರಮ್...
ReplyDeleteಸುಂದರವಾದ ಕವಿತೆ...!
ಅದಕ್ಕೆ ತಕ್ಕ ಫೋಟೊ...!
"ಉದುರೆಲೆಗೆ ಸಡಗರವೇ, ಮತ್ತೇಕೆ ಈ ಬಣ್ಣ?
ಬಣ್ಣದಾ ನಗುವಲ್ಲಿ ಮುಚ್ಚುತಿಹುದೇ ನೋವ?"
ಈ ಸಾಲುಗಳು ಬಹಳ ಇಷ್ಟವಾಯಿತು...
ಅಭಿನಂದನೆಗಳು ಚಂದದ ಕವನಕ್ಕೆ...
ಕವನ ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು :)
ReplyDeleteಸುಂದರ ಕವಿತೆ ..
ReplyDeletespring ಶಬ್ದ ಉದ್ದೇಶ ಪೂರ್ವಕವಾಗಿ ಸೆರಿಸಿದ್ದೆ ..
"ಮರಳಿ ಬರುವುದು spring ಮರಕು೦ಟು ನ೦ಬಿಕೆ! "
ಮರಳಿ ಬರುವುದು "ವಸಂತ" ಮರಕು೦ಟು ನ೦ಬಿಕೆ!
ಈ ರೀತಿ ಸೇರಿಸಿದ್ದರೆ ಇನ್ನು ಉತ್ತಮವಾಗಿರುತ್ತಿತ್ತು ಎಂಬುದು ನನ್ನ ಅಭಿಪ್ರಯವಷ್ಟೆ ..
ನಿಮ್ಮ ಬ್ಲೊಗ್ ಗೆ ಇದೆ ಮೊದಲ ಬೇಟಿ . ಸುಂದರ ಬರಹದ ಸ್ವಾಗತ ..ತುಂಬ ಇಷ್ಟವಾಯಿತು...
ಶ್ರೀಧರ ಭಟ್ಟ ...
ಧನ್ಯವಾದ ಶ್ರೀಧರ್.. ನನ್ನ ಬ್ಲಾಗಿಗೆ ಸ್ವಾಗತ :) ನೀವು ಊಹಿಸಿದ೦ತೆ spring ಉದ್ದೇಶಪೂರ್ವಕವಾಗಿಯೇ ಬಳಸಿದ್ದು.... Fall & Spring ಜೊತೆ ಸರಿಹೋಗುತ್ತವೆಯಲ್ಲ.......
ReplyDeleteಕವಿತೆ ಹಾಗೂ ಫೋಟೋ ಎರಡೂ ತುಂಬಾ ಸುಂದರವಾಗಿವೆ
ReplyDelete